ಚಾಯಿಬಾಸಾ, ನ.28 (DaijiworldNews/PY): "ಜಾರ್ಖಂಡ್ನ ಸಿಂಘ್ ಭೂಮ್ ಜಿಲ್ಲೆಯಲ್ಲಿ ನಕ್ಸಲರ ಹಾಗೂ ಭದ್ರತಾ ಪಡೆಗಳ ಮಧ್ಯೆ ಗುಂಡಿನ ಚಕಮಕಿ ನಡೆದಿದೆ" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಶುಕ್ರವಾರ ಸಂಜೆ ಮಾನ್ಮರು ಅರಣ್ಯದಲ್ಲಿ ಭದ್ರತಾ ಪಡೆ ಹಾಗೂ ಪಿಎಲ್ಎಫ್ಐ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಸ್ವಲ್ಪ ಸಮಯದ ನಂತರ ನಕ್ಸಲರು ಕಾಡಿನ ಒಳಕ್ಕೆ ಓಡಿ ಹೋದರು" ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
"ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಚಕ್ರಧರಪುರದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ನಾಥು ಸಿಂಗ್ ಮೀನಾ ನೇತೃತ್ವದ ಪೊಲೀಸ್ ಪಡೆಯು ನಕ್ಸಲರ ಬೆನ್ನತ್ತಿ ಹೋಗಿತ್ತು. ನಂತರ ಇತರ ಪೊಲೀಸ್ ಪಡೆ ಸೇರಿದಂತೆ ಭದ್ರತಾ ಪಡೆಯು ಕಾರ್ಯಾಚರಣೆಯಲ್ಲಿ ತೊಡಗಿತು" ಎಂದು ಹೇಳಿದ್ದಾರೆ.
"ರಾಂಚಿಯಿಂದ ಹೆಚ್ಚುವರಿ ಪೊಲೀಸ್ ಪಡೆಯು ಎನ್ಕೌಂಟರ್ ನಡೆದ ಸ್ಥಳವನ್ನು ತಲುಪಿದ್ದು, ಭದ್ರತಾ ಪಡೆಗಳು ಸ್ಥಳದಲ್ಲಿಯೇ ಕ್ಯಾಂಪ್ ಮಾಡಿವೆ" ಎಂದು ಡಿಐಜಿ ರಾಜೀವ್ ರಂಜನ್ ಸಿಂಗ್ ಹೇಳಿದ್ದಾರೆ.