ಪಾಟ್ನಾ,ನ. 28 (DaijiworldNews/HR): ಬಿಹಾರ ರಾಜ್ಯಸಭೆಗೆ ಉಪಚುನಾವಣೆ ನಡೆಯಲಿದ್ದು, ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರಿಗೆ ಬಿಜೆಪಿ ರಾಜ್ಯಸಭಾ ಟಿಕೆಟ್ ನೀಡಿದೆ.
ರಾಜ್ಯಸಭೆಗೆ ಉಪಚುನಾವಣೆ ಡಿಸೆಂಬರ್ 14ರಂದು ನಡೆಯಲಿದ್ದು, ಆರ್ಜೆಡಿ ಪಕ್ಷ ಈ ಚುನಾವಣೆಯಲ್ಲಿ ಭಾಗವಹಿಸಿದರೆ ಮಾತ್ರ ಚುನಾವಣೆ ನಡೆಯಲಿದೆ. ಇಲ್ಲವಾದರೆ ಅವಿರೋಧವಾಗಿ ಸುಶೀಲ್ ಮೋದಿ ರಾಜ್ಯಸಭೆ ಪ್ರವೇಶಿಸಲಿದ್ದಾರೆ.
ಇನ್ನು ಈ ಹಿಂದೆ ನಿತೀಶ್ ಕುಮಾರ್ ಸರ್ಕಾರದಲ್ಲಿ ಸುಶೀಲ್ ಮೋದಿ ಉಪಮುಖ್ಯಮಂತ್ರಿಯಾಗಿದ್ದರು. ಆದರೆ ಈ ಬಾರಿ ತಾರಕಿಶೋರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಬಿಜೆಪಿ ನೇಮಿಸಿ, ಸುಶೀಲ್ ಮೋದಿಗೆ ದೆಹಲಿ ಮಟ್ಟದ ಸ್ಥಾನಮಾನ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು.