ನವದೆಹಲಿ, ನ. 28 (DaijiworldNews/HR): ಪೆಟ್ರೋಲ್ ಮತ್ತು ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದೀಗ ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸಿವೆ.
ದೆಹಲಿಯಲ್ಲಿ ಪೆಟ್ರೋಲ್ ಇಂದು ಲೀಟರ್ ಗೆ 82 ರೂ ಮತ್ತು ಡೀಸೆಲ್ 72 ರೂ. ಗೆ ಏರಿದೆ. ಡೀಸೆಲ್ ದರವನ್ನು 26ರಿಂದ 28 ಪೈಸೆಯಷ್ಟು, ಪೆಟ್ರೋಲ್ ದರವನ್ನು ಲೀಟರ್ ಗೆ 21ರಿಂದ 24 ಪೈಸೆಯಷ್ಟು ಹೆಚ್ಚಿಸಲಾಗಿದೆ.
ಇನ್ನು ನ. 27ರಂದು ದೇಶದ ನಾಲ್ಕು ಪ್ರಮುಖ ಮಹಾನಗರಗಳಲ್ಲಿ ಡೀಸೆಲ್ ದರವನ್ನು 22 ರಿಂದ 26 ಪೈಸೆ ಮತ್ತು ಪೆಟ್ರೋಲ್ ದರವನ್ನು ಪ್ರತಿ ಲೀಟರ್ಗೆ 17 ರಿಂದ 19 ಪೈಸೆ ಹೆಚ್ಚಿಸಲಾಗಿತ್ತು.