ಅಹಮದಾಬಾದ್, ನ.28 (DaijiworldNews/PY): ಪ್ರಧಾನಿ ಕಚೇರಿ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಇಮೇಲ್ ವಿಳಾಸ ಸೃಷ್ಟಿಸಿ, ತನ್ನ ದೂರುಗಳನ್ನು ಬಗೆಹರಿಸುವಂತೆ ಗುಜರಾತ್ನ ಸರ್ಕಾರಿ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದ ಆರೋಪದ ಮೇಲೆ ಅಹಮದಾಬಾದ್ ಸೈಬರ್ ಅಪರಾಧ ವಿಭಾಗವು ವೈದ್ಯರೋರ್ವರನ್ನು ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಬಂಧಿತನನ್ನು ಡಾ.ವಿಜಯ್ ಪಾರಿಖ್ ಎಂದು ಗುರುತಿಸಲಾಗಿದ್ದು, ಅಮ್ರೆಲಿಯಲ್ಲಿರುವ ಆತನ ಮನೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಗುಜರಾತ್ನ ಕೆಲವು ಅಧಿಕಾರಿಗಳಿಗೆ ಹಾಗೂ ಐಪಿಎಸ್ ಅಧಿಕಾರಿಗಳಿಗೆ ಇತ್ತೀಚೆಗೆ ಪ್ರಧಾನ ಮಂತ್ರಿ ಕಚೇರಿಯದ್ದು ಎನ್ನಲಲಾಗಿದ್ದ ಇಮೇಲ್ಗಳು ಬಂದಿದ್ದವು.
ಪಾರಿಖ್ ಎನ್ನುವವರು ಅಹಮದಾಬಾದ್ನ ಪರಿಮಳ್ ಗಾರ್ಡನ್ನ ನಿಶಿತ್ ಶಾ ಎನ್ನುವವರಿಂದ ಎರಡು ಕಚೇರಿಗಳನ್ನು ಖರೀದಿ ಮಾಡಿದ್ದರೆ. ಆದರೆ, ಕಚೇರಿಗಳನ್ನು ಹಸ್ತಾಂತರಿಸದೇ ನಿಶಿತ್ ಶಾ ಎನ್ನುವವರು ಮೋಸ ಮಾಡಿದ್ದಾರೆ. ಹಾಗಾಗಿ ಪಾರಿಖ್ ಎನ್ನುವವರು ನ್ಯಾಯಕ್ಕಾಗಿ ಪ್ರಧಾನ ಮಂತ್ರಿ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಹಾಗಾಗಿ ಪಾರಿಖ್ ಅವರ ಅರ್ಜಿಯನ್ನು ಗುಜರಾತ್ನ ಅಧಿಕಾರಿಗಳು ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಇಮೇಲ್ನಲ್ಲಿ ಬರೆದಿತ್ತು.
ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಸಲುವಾಗಿ ಹಾಗೂ ಕಚೇರಿಯನ್ನು ಸ್ವಾಧೀನಪಡಿಸಿಕೊಳ್ಳುವ ನಿಟ್ಟಿನಲ್ಲಿ ಪಾರಿಖ್ ಅವರೇ ಈ ನಕಲಿ ಇಮೇಲ್ ಐಡಿಗಳನ್ನು ಸೃಷ್ಠಿ ಮಾಡಿದ್ದಾರೆ ಎಂದು ಸೈಬರ್ ಅಪರಾಧಿ ವಿಭಾಗದ ಪರಿಶೀಲನೆಯ ಬಳಿಕ ತಿಳಿದುಬಂದಿದೆ.
ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.