ಬೆಂಗಳೂರು, ನ.28 (DaijiworldNews/PY): ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಶುಕ್ರವಾರ ಸಂಜೆ ಸಂತೋಷ್ ಅವರು ಡಾಲರ್ಸ್ ಕಾಲೊಮಿಯ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ತಕ್ಷಣವೇ ಅವರ ಕುಟುಂಬದವರನ್ನು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಅವರು ನಿದ್ರೆ ಮಾತ್ರೆಗಳನ್ನು ತೆಗೆದುಕೊಂಡಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಶುಕ್ರವಾರ ತಡರಾತ್ರಿ ಸಿಎಂ ಬಿಎಸ್ವೈ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದು, ಸಂತೋಷ್ ಅವರ ಆರೋಗ್ಯ ವಿಚಾರಿಸಿದ್ದಾರೆ.
ಬಳಿಕ ಮಾತನಾಡಿದ ಸಿಎಂ ಅವರು, "ಶುಕ್ರವಾರ ಬೆಳಿಗ್ಗೆ ಸಂತೋಷ್ ಅವರನ್ನು ಭೇಟಿ ಮಾಡಿದ್ದು, ಇಬ್ಬರೂ ಕೂಡಾ ವಾಯುವಿಹಾರ ಮಾಡಿದ್ದೆವು. ಆದರೆ, ಆತ್ಮಹತ್ಯೆ ಕಾರಣ ಏನು ಎಂದು ತಿಳಿದಿಲ್ಲ. ಅವರು ಕೂಡಲೇ ಚೇತರಿಸಿಕೊಳ್ಳಲಿ" ಎಂದಿದ್ದಾರೆ.