ನವದೆಹಲಿ, ನ. 27 (DaijiworldNews/MB) : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಕಾರ್ಯಕ್ರಮದ ವೇಳೆ ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗ ಮಾಡಿ ಪ್ರತಿಭಟನಾನಿರತ ರೈತರನ್ನು ತಡೆದಿದ್ದ ಪೊಲೀಸರು ಕೊನೆಗೂ ರೈತರಿಗೆ ದೆಹಲಿಗೆ ಪ್ರವೇಶಿಸಲು ಅವಕಾಶ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿರುವ ರೈತ ಸಂಘಟನೆಗಳ ನಾಯಕರು, ನಮಗೆ ದಹಲಿ ಪ್ರವೇಶಿಸಿ ನಗರದ ಹೊರವಲಯದ ಬುರಾರಿ ಎಂಬಲ್ಲಿನ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ದೆಹಲಿ ಚಲೋ ಪ್ರತಿಭಟನಾ ಮೆರವಣೆಗೆಯ ಹಿನ್ನೆಲೆ ಸ್ಟೇಡಿಯಂನ್ನು ತಾತ್ಕಲಿಕವಾಗಿ ಜೈಲಾಗಿ ಮಾರ್ಪಡಿಸಲು ದೆಹಲಿ ಪೊಲೀಸರು ಆಡಳಿತಾರೂಢ ಆಮ್ ಆದ್ಮಿ ಸರ್ಕಾರಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಈಗಾಗಲೇ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.