ಬೆಂಗಳೂರು, ನ. 27 (DaijiworldNews/MB) : ''ವೀರಶೈವ ಲಿಂಗಾಯತರು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರುವುದು ತಪ್ಪಾ?'' ಎಂದು ಪ್ರಶ್ನಿಸಿರುವ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ''ಲಿಂಗಾಯಿತರಲ್ಲಿ ಕೆಲವು ಉಪಜಾತಿಗಳಲ್ಲದೆ, ಒಕ್ಕಲಿಗರಲ್ಲೂ ಕೆಲವು ಜಾತಿಗಳನ್ನು ಸೇರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಬೇಕಾಗಿದೆ. ಈ ಹಿನ್ನೆಲೆ ವಿಚಾರವನ್ನು ಮುಂದೂಡಲಾಗಿದೆ'' ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಕುಂಚಿಟಿಗ, ಒಕ್ಕಲಿಗರು ಒಬಿಸಿಯಿಂದ ಬಿಟ್ಟು ಹೋಗಿದ್ದಾರೆ. ಅವರನ್ನು, ವೀರಶೈವ ಲಿಂಗಾಯತರನ್ನು ಒಬಿಸಿಗೆ ಸೇರಿಸಬೇಕೆಂದು ಕೇಂದ್ರಕ್ಕೆ ಪ್ರಸ್ತಾವಣೆ ಸಲ್ಲಿಸಬೇಕು ಎಂದು ಯೋಜಿಸಲಾಗಿತ್ತು. ಕೇಂದ್ರದ ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿ ಉದ್ದೇಶಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿತ್ತು'' ಎಂದು ತಿಳಿಸಿದ್ದಾರೆ.
''ವೀರಶೈವ ಸಮಾಜವು 1999ರಿಂದಲೂ ಹೋರಾಡುತ್ತಿದ್ದಾರೆ. ಈಗ ರಾಜ್ಯದಲ್ಲಿ ಮೀಸಲಾತಿ ಕೇಳುತ್ತಿಲ್ಲ ಬದಲಾಗಿ ಕೇಂದ್ರದ ಕೋಟಾದಲ್ಲಿ ಮೀಸಲಾತಿ ಪಡೆಯುವುದು ನಮ್ಮ ಉದ್ದೇಶ'' ಎಂದು ಹೇಳಿದರು.