ಜಮ್ಮು, ನ.27 (DaijiworldNews/PY): "ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘಿಸಿ ಶುಕ್ರವಾರ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಸಮೀಪ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಗೆ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ" ಎಂದು ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
"ಪಾಕ್ ಸೈನ್ಯವು ಸುಂದರ್ಬಾನಿ ವಲಯದಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯು ಗುಂಡಿನ ದಾಳಿ ನಡೆಸಿದೆ" ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
"ಪಾಕ್ ಸೇನೆಯ ಅಪ್ರಚೋದಿತ ದಾಳಿಗೆ ಗಂಭೀರ ಗಾಯಗೊಂಡಿದ್ದ ಇಬ್ಬರು ಯೋಧರಾದ ನಾಯಕ್ ಪ್ರೇಮ್ ಬಹದ್ದೂರ್ ಖತ್ರಿ ಹಾಗೂ ಸುಕ್ಬೀರ್ ಸಿಂಗ್ ಅವರು ಹುತಾತ್ಮರಾಗಿದ್ದಾರೆ. ಈ ಇಬ್ಬರು ಯೋಧರ ಕರ್ತವ್ಯ ನಿಷ್ಠೆಗೆ ಹಾಗೂ ತ್ಯಾಗಕ್ಕಾಗಿ ದೇಶ ಎಂದಿಗೂ ಚಿರಋಣಿಯಾಗಿದೆ" ಎಂದಿದ್ದಾರೆ.