ಮುಂಬೈ, ನ. 27 (DaijiworldNews/HR): ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವಾಗ ಪೋಷಕರು ತಮ್ಮ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗದಂತೆ ಮುಂಬೈ ರೈಲ್ವೆ ನಿರ್ಭಂದ ಹೇರಿದೆ.
ಸಾಂಧರ್ಭಿಕ ಚಿತ್ರ
ಈ ನಿಯಮಗಳನ್ನು ಹಿಂದೆಯೇ ಜಾರಿಗೆ ತರಲಾಗಿತ್ತು ಆದರೆ ಮಹಿಳೆಯರು ತಮ್ಮೊಂದಿಗೆ ಮಕ್ಕಳನ್ನು ರೈಲಿನಲ್ಲಿ ಪ್ರಯಾಣಿಸಲು ಕರೆತರುತ್ತಿದ್ದರು. ಇದೀಗ ಮತ್ತೊಮ್ಮೆ ಮಾರ್ಗಸೂಚಿ ಹೊರಡಿಸಲಾಗಿದ್ದು, ರೈಲುಗಳಲ್ಲಿ ಮಕ್ಕಳು ಪ್ರಯಾಣ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರತಿ ರೈಲ್ವೆ ನಿಲ್ದಾಣಗಳ ದ್ವಾರದ ಬಳಿ ಆರ್.ಪಿ.ಎಫ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಇನ್ನು ಮಹಾರಾಷ್ಟ್ರ ಸರ್ಕಾರ ಕಳೆದ ಅಕ್ಟೋಬರ್ನಲ್ಲಿ ಬಿಗಿನ್ ಅಗೇನ್ ಮಿಷನ್ನ ಅಡಿಯಲ್ಲಿ ಅನಿವಾರ್ಯ ಕಾರ್ಯಗಳ ಸಂದರ್ಭದಲ್ಲಿ ಮತ್ತು ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರಿಗೆ ನಿಗದಿತ ಸಮಯದಲ್ಲಿ ರೈಲು ಪ್ರಯಾಣ ಮಾಡಲು ಅವಕಾಶ ಕಲ್ಪಿಸಿತ್ತು.