ನವದೆಹಲಿ, ನ. 27 (DaijiworldNews/HR): ಅರಬ್ಬಿ ಸಮುದ್ರದಲ್ಲಿ ಮಿಗ್ 29ಕೆ ತರಬೇತಿ ವಿಮಾನವೊಂದು ಪತನಗೊಂಡಿದ್ದು, ಓರ್ವ ಪೈಲಟ್ನನ್ನು ರಕ್ಷಿಸಲಾಗಿದ್ದು, ಮತ್ತೊರ್ವ ಪೈಲಟ್ಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿರುವುದಾಗಿ ನೌಕಾಪಡೆ ತಿಳಿಸಿದೆ.
ಮಿಗ್ 29ಕೆ ತರಬೇತಿ ವಿಮಾನ ಅರಬ್ಬಿ ಸಮುದ್ರ ಪ್ರದೇಶದಲ್ಲಿ ಸಂಭವಿಸಿದ್ದು, ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ವರದಿ ವಿವರಿಸಿದೆ.
ಭಾರತೀಯ ನೌಕಾಪಡೆಯಲ್ಲಿ 40ಕ್ಕೂ ಅಧಿಕ ಮಿಗ್ 29 ಯುದ್ಧ ವಿಮಾನಗಳಿದ್ದು, ಇವುಗಳು ಗೋವಾ ಹಾಗೂ ಐಎನ್ ಎಸ್ ವಿಕ್ರಮಾದಿತ್ಯದ ಮೂಲಕ ಕಾರ್ಯಾಚರಿಸುತ್ತಿರುವುದಾಗಿ ತಿಳಿದು ಬಂದಿದೆ.