ಹೈದರಾಬಾದ್, ನ.27 (DaijiworldNews/PY): "ಕೊರೊನಾ ಲಸಿಕೆ ತಯಾರಿಸುತ್ತಿರುವ ಹೈದರಾಬಾದ್ನ ಭಾರತ್ ಬಯೋಟೆಕ್ಸ್ ಕೇಂದ್ರಕ್ಕೆ ನ.28ರ ಶನಿವಾರದಂದು ಪ್ರಧಾನಿ ಮೋದಿ ಅವರು ಭೇಟಿ ನೀಡಲಿದ್ದಾರೆ" ಎಂದು ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಹೇಳಿದ್ದಾರೆ.
"ಪ್ರಧಾನಿ ಮೋದಿ ಅವರು ಪುಣೆಯಿಂದ ಭಾರತೀಯ ವಾಯುಪಡೆಯ ವಿಮಾನದ ಮುಖೇನ ಪ್ರಯಾಣ ಬೆಳೆಸಲಿದ್ದು, ಮಧ್ಯಾಹ್ನದ ಬಳಿಕ ಹಾಕಿಂಪೇಟೆ ವಾಯುಪಡೆ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ" ಎಂದು ಮುಖ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಬಳಿಕ ಪ್ರಧಾನಿ ಮೋದಿ ಅವರು ಜಿನೋಮ್ ವ್ಯಾಲಿಯಲ್ಲಿನ ಭಾರತ್ ಬಯೋಟೆಕ್ಸ್ ಫೆಸಿಲಿಟಿ ಕೇಂದ್ರಕ್ಕೆ ಭೇಟಿ ನೀಡಲಿದ್ದು, ಲಸಿಕಾ ಉತ್ಪಾದನೆ ಹಾಗೂ ಚಟುವಟಿಕೆಗಳ ವೀಕ್ಷಣೆ ಮಾಡಲಿದ್ದಾರೆ. ಸಂಜೆಯ ವೇಳೆಗೆ ನವದೆಹಲಿಗೆ ವಾಪಾಸ್ಸಾಗಲಿದ್ದಾರೆ" ಎಂದು ಮೂಲಗಳು ತಿಳಿಸಿವೆ.