ನವದೆಹಲಿ, ನ. 27 (DaijiworldNews/HR): ಅಮೇರಿಕಾದ ರಕ್ಷಣಾ ಉಪಕರಣಗಳ ಉತ್ಪಾದನಾ ಕಂಪನಿ ಜನರಲ್ ಆಟೋಮಿಕ್ಸ್ನಿಂದ ಭಾರತೀಯ ನೌಕಾಪಡೆಯು ಎರಡು ಡ್ರೋನ್ಗಳನ್ನು ಭಾರತದ ವ್ಯಾಪ್ತಿಯ ಸಮುದ್ರದ ಮೇಲೆ ನಿಗಾ ಇಡುವ ಉದ್ದೇಶದಿಂದ ಗುತ್ತಿಗೆ ಮೇಲೆ ಪಡೆದಿದೆ.
ಸಾಂಧರ್ಭಿಕ ಚಿತ್ರ
ಈ ಡ್ರೋನ್ಗಳನ್ನು ಅಗತ್ಯವಿದ್ದಾಗ ಲಡಾಖ್ ಪ್ರದೇಶದಲ್ಲೂ ಈ ಮಾನವರಹಿತ ನೌಕೆಯನ್ನು ನಿಯೋಜಿಸಬಹುದು ಎಂದು ಮೂಲಗಳು ತಿಳಿಸಿವೆ.
ಇನ್ನು ಶಸ್ತ್ರ ರಹಿತ ಎಂಕ್ಯು-9ಬಿ ಸೀ ಗಾರ್ಡಿಯನ್ ಡ್ರೋನ್ಗಳನ್ನು ಒಂದು ವರ್ಷಕ್ಕೆ ತೆಗೆದುಕೊಳ್ಳಲಾಗಿದ್ದು, ಇನ್ನೊಂದು ವರ್ಷಕ್ಕೆ ವಿಸ್ತರಣೆ ಮಾಡುವ ಆಯ್ಕೆಯೊಂದಿಗೆ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.