ನವದೆಹಲಿ, ನ.25 (DaijiworldNews/PY): ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಬುಧವಾರ ಪಿಡಿಪಿ ಯುವಘಟಕದ ಅಧ್ಯಕ್ಷ ವಹೀದ್ ಪರ್ರಾ ಅವರನ್ನು ಬಂಧಿಸಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾದಿಂದ ಇತ್ತೀಚೆಗೆ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ವಹೀದ್ ಪರ್ರಾ ಅವರನ್ನು ಇಲ್ಲಿನ ಎನ್ಐಎ ಕೇಂದ್ರ ಕಚೇರಿಯಲ್ಲಿ ಸೋಮವಾರ ವಿಚಾರಣೆ ನಡೆಸಲಾಗುತ್ತಿತ್ತು.
ವಹೀದ್ ಪರ್ರಾ ಅವರನ್ನು ಹಿಜ್ಬುಲ್ ಮುಜಾಹುದ್ದೀನ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕವಿದೆ ಎನ್ನುವ ಆರೋಪದ ಮೇಲೆ ಬಂಧಿಸಲಾಗಿದೆ.
ವಹೀದ್ ಅವರು ಪುಲ್ವಾಮಾದಲ್ಲಿ ಪಿಡಿಯನ್ನು ಪುನರ್ಸ್ಥಾಪನೆ ಮಾಡಿದ್ದರು. ಉಗ್ರರಿಗೆ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಡಿಎಸ್ಪಿ ದೇವೇಂದರ್ ಸಿಂಗ್ ಅವರ ತನಿಖೆಯ ಸಂದರ್ಭ ವಹೀದ್ ಅವರ ಹೆಸರು ಕೇಳಿ ಬಂದಿತ್ತು.
"ಹಿಜ್ಬುಲ್ ಮುಜಾಹಿದ್ದೀನ್ ಅವರನ್ನು ಇತರ ಆರೋಪಿಗಳೊಂದಿಗೆ ಸಂಚು ರೂಪಿಸಿದ್ದಕ್ಕಾಗಿ ಬೆಂಬಲಿಸಿದ್ದಕ್ಕಾಗಿ ನವೀದ್ ಬಾಬು-ಡೇವಿಂದರ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎನ್ಐಎ ಹೀದ್ ಉರ್ ರೆಹಮಾನ್ ಪರ್ರಾ ಅವರನ್ನು ಬಂಧಿಸಿದೆ" ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ.