ನವದೆಹಲಿ, ನ.25 (DaijiworldNews/PY): ಜನವರಿ 1ರಿಂದ ಲ್ಯಾಂಡ್ಲೈನ್ ಫೋನ್ನಿಂದ ಯಾವುದೇ ಮೊಬೈಲ್ಗೆ ಕರೆ ಮಾಡಬೇಕಾದರೆ ಪ್ರಾರಂಭದಲ್ಲಿ '0' ಒತ್ತುವುದನ್ನು ಕಡ್ಡಾಯ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವು ಲ್ಯಾಂಡ್ಲೈನ್ನಿಂದ ಮೊಬೈಲ್ಗೆ ಕರೆ ಮಾಡುವ ಮುನ್ನ '0' ಅನ್ನು ಡಯಲ್ ಮಾಡಬೇಕು ಎಂದು ಮೇ.29ರಂದು ದೂರಸಂಪರ್ಕ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿತ್ತು. ನ.20ರಂದು ಸುತ್ತೋಲೆ ಹೊರಡಿಸಿದ ಟ್ರಾಯ್ ಈ ಶಿಫಾರಸ್ಸನ್ನು ಜಾರಿಗೆ ತರುವುದಾಗಿ ತಿಳಿಸಿದೆ.
ಗ್ರಾಹಕರು ಪ್ರಾರಂಭದಲ್ಲಿ '0' ಸಂಖ್ಯೆಯನ್ನು ಒತ್ತದೇ ಕರೆ ಮಾಡಿದ್ದಲ್ಲಿ ರೆಕಾರ್ಡ್ ಮೂಲಕ '0' ಅನ್ನು ಒತ್ತುವಂತೆ ಮಾಹಿತಿ ನೀಡಬೇಕು ಎಂದು ಕಂಪೆನಿಗಳಿಗೆ ಸೂಚನೆ ನೀಡಲಾಗಿದೆ.
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸದ್ಯಕ್ಕೆ 11 ಅಂಕೆಗಳಿಗೆ ಮೊಬೈಲ್ ಸಂಖ್ಯೆಯನ್ನು ಏರಿಸುವಂತ ಯಾವುದೇ ರೀತಿಯಾದ ತೀರ್ಮಾನ ತೆಗೆದುಕೊಂಡಿಲ್ಲ ಎಂದು ತಿಳಿಸಿತ್ತು.