ಕೋಲ್ಕತ್ತ, ನ.25 (DaijiworldNews/PY): "ಪಶ್ಚಿಮ ಬಂಗಾಳವು ಎರಡನೇ ಕಾಶ್ಮೀರವಾಗಿ ಬದಲಾಗಿದೆ" ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಹೇಳಿದ್ದಾರೆ.
ಬುಧವಾರ ಬೀರ್ಭೂಮ್ ಜಿಲ್ಲೆಯಲ್ಲಿ ಚಹಾ-ಚಕ್ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಪಶ್ಚಿಮ ಬಂಗಾಳದಲ್ಲಿ ಪ್ರತಿ ನಿತ್ಯ ಭಯೋತ್ಪಾದಕರನ್ನು ಬಂಧಿಸಲಾಗುತ್ತದೆ. ಅಲ್ಲದೇ, ದಿನಬೆಳಗಾದರೆ ಅಕ್ರಮ ಬಾಂಬ್ ತಯಾರಿಕಾ ಕಾರ್ಖಾನೆಗಳು ಪತ್ತೆಯಾಗುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಬಾಂಬ್ ತಯಾರಿಕಾ ಕಾರ್ಖಾನೆಗಳು ಮಾತ್ರ ಸರಿಯಾಗಿ ಕೆಲಸ ಮಾಡುತ್ತಿರುವ ಕಾರ್ಖಾನೆಗಳಾಗಿದೆ" ಎಂದು ಲೇವಡಿ ಮಾಡಿದ್ದಾರೆ.
ದಿಲೀಪ್ ಘೋಷ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಆಡಳಿತರೂಢ ಟಿಎಂಸಿ ಪಕ್ಷ, "ಈಗ ಉತ್ತರಪ್ರದೇಶದತ್ತ ನಿಮ್ಮ ಗಮನಹರಿಸಿ, ಯುಪಿಯಲ್ಲಿ ಕಾನೂನಿನ ಅಂತ್ಯವಾಗುತ್ತಿದೆ. ಪಶ್ಚಿಮ ಬಂಗಾಳದ ಹೆಸರನ್ನು ಹಾಳು ಮಾಡಲು ದಿಲೀಪ್ ಘೋಷ್ ಅವರು ಪ್ರಯತ್ನಿಸುತ್ತಿದ್ದಾರೆ" ಎಂದು ಆರೋಪಿಸಿದೆ.