ಬೆಂಗಳೂರು, ನ.24 (DaijiworldNews/HR): ಡ್ರಗ್ಸ್ ಸಾಗಾಟದಲ್ಲಿ ತೊಡಗಿದ್ದ ನಾಲ್ವರನ್ನು ಎನ್ಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಬಂಧಿತರಿಂದ 6.870 ಕೆಜಿ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಶುಕ್ಲಾ ಮತ್ತು ಮರಿಯಾ ಹಾಗೂ ನೈಜೀರಿಯಾ ಮೂಲದ ಒನೊವೋ, ಓಕ್ವರ್ ಎಂದು ಗುರುತಿಸಲಾಗಿದೆ.
ಮಾದಕ ವಸ್ತುಗಳನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದು, ಅದರಲ್ಲಿದ್ದ 6.870 ಕೆಜಿ ಸ್ಯೂಡೋಫೆಡ್ರೈನ್ನನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸ್ಯೂಡೋಫೆಡ್ರೈನ್ನಂತಹ ಮಾದಕ ವಸ್ತುಗಳನ್ನು ಆಗ್ನೇಯ ಏಷ್ಯಾ ಹಾಗೂ ಆಫ್ರಿಕಾಗಳಿಗೆ ಅಕ್ರಮವಾಗಿ ರಫ್ತು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.