ದಾವಣಗೆರೆ, ನ. 24 (DaijiworldNews/MB) : ನಿನಗೆ ತಾಕತ್ತಿದ್ರೆ ರಾಜ್ಯ ಬಂದ್ ಮಾಡು ನೋಡೋಣ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ಗೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಸವಾಲೆಸೆದಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ''ವಾಟಾಲ್ ನಾಗರಾಜ್ ಒಬ್ಬ ಡೊಂಬರಾಟದ ವ್ಯಕ್ತಿ'' ಎಂದು ಹೇಳಿದ್ದು, ''ಅವರು ಬೆಂಗಳೂರಿನಲ್ಲಿ ಎಷ್ಟು ಅಕ್ರಮ ಸೈಟ್ ಮಾಡಿದ್ದಾರೆ ಎಂದು ನನ್ನಲ್ಲಿ ಎಲ್ಲಾ ಮಾಹಿತಿ, ದಾಖಲೆಯಿದೆ. ಮೈಸೂರಿನ ವರುಣ ಕ್ಷೇತ್ರದಲ್ಲಿ 70 ಎಕರೆ ಭೂಮಿ ಅಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ತಮಿಳರು ಅವರ ಜಮೀನಲ್ಲಿ ಕೆಲಸ ಮಾಡುತ್ತಿದ್ದಾರೆ'' ಎಂದು ಹೇಳಿದರು.
''ಮುಖ್ಯಮಂತ್ರಿ ಬಗ್ಗೆ ಕೆಟ್ಟ ಪದ ಬಳಸಿದರೆ ಹುಷಾರ್'' ಎಂದು ಹೇಳಿದ ರೇಣುಕಾಚಾರ್ಯರವರು, ''ಡೊಂಬರಾಟದ ವಾಟಾಳ್ ನಾಗರಾಜ್ ನಿನಗೆ ತಾಕತ್ತಿದ್ದರೆ ಈ ರಾಜ್ಯವನ್ನು ಬಂದ್ ಮಾಡು ನೋಡೋಣಾ'' ಎಂದು ಸವಾಲು ಹಾಕಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಯಡಿಯೂರಪ್ಪರನ್ನು ಹಾಡಿಹೊಗಳಿದ ರೇಣುಕಾಚಾರ್ಯರವರು, ''ಯಡಿಯೂರಪ್ಪನವರು ಆಧುನಿಕ ಬಸವಣ್ಣ'' ಎಂದು ಹೇಳಿದರು.
''ಸಿಎಂ ಚರ್ಚೆ ನಡೆಸಿ ಮಾರಾಠಿ ನಿಗಮಕ್ಕೆ ೫೦೦ ಕೋಟಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಬಸವಣ್ಣನವರು ಕೂಡಾ ಅಂದು ಸಾಮಾಜಿಕ ನ್ಯಾಯ ದೊರಕಿಸಿದ್ದರು. ಅದೇ ರೀತಿ ಬಿಎಸ್ವೈ ಮಾಡಿದ್ದಾರೆ. ಅವರು ಆಧುನಿಕ ಬಸವಣ್ಣ'' ಎಂದು ಹೇಳಿದರು.