ಹೈದರಾಬಾದ್,ನ.24 (DaijiworldNews/HR): ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು ಪಾಕಿಸ್ತಾನದ ಖೈದ್-ಎ-ಅಜಮ್ ಮುಹಮ್ಮದ್ ಅಲಿ ಜಿನ್ನಾ ಅವರ ಹೊಸ ಅವತಾರ ಎಂದು ಬಿಜೆಪಿಯ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಮತ್ತು ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, " ತೆಲಂಗಾಣದ ಜನರು ಅಭಿವೃದ್ಧಿ ನೋಡಿ ಅದಕ್ಕೆ ತಕ್ಕಂತೆ ಮತ ಚಲಾಯಿಸಬೇಕು, ರಾಜವಂಶದ ರಾಜಕೀಯದ ವಿರುದ್ಧ ಮತ ಚಲಾಯಿಸಬೇಕು. ನಾವು ದೇಶದಲ್ಲಿ ಕುಟುಂಬ ರಾಜಕೀಯವನ್ನು ತೆಗೆದುಹಾಕಿದ್ದೇವೆ. ಕಾಶ್ಮೀರದಲ್ಲಿ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು ಜನರು ಶಾಶ್ವತ ಕ್ವಾರಂಟೈನ್ಗೆ ಕಳುಹಿಸಿದ್ದಾರೆ" ಎಂದರು.
ಇನ್ನು "ಟಿಆರ್ಎಸ್ ಮತ್ತು ಎಂಐಎಂ ಒಂದೇ ನಾಣ್ಯದ ಎರಡು ಮುಖಗಳಿದ್ದಾ ಹಾಗೆ ಹೈದರಾಬಾದ್ ಅನ್ನು ಇಸ್ತಾಂಬುಲ್ ಆಗಿ ಪರಿವರ್ತಿಸಲು ಕೆಸಿಆರ್ ಬಯಸಿದ್ದಾರೆ. ಟರ್ಕಿಯು ಶೇ 100 ರಷ್ಟು ಮುಸ್ಲಿಂ ದೇಶ. ಟರ್ಕಿಯ ಅಧ್ಯಕ್ಷರು ನಮ್ಮ ದೇಶದ ವಿರುದ್ಧ ಮಾತನಾಡುತ್ತಾರೆ. ಭಾರತದ ಹೈದರಾಬಾದ್ ಪಾಕಿಸ್ತಾನದ ಹೈದರಾಬಾದ್ನಂತೆ ಕಾಣಬೇಕೆಂದು ಎಂಐಎಂ ಬಯಸಿದೆ. ನಾವು ಹೈದರಾಬಾದ್ ಅನ್ನು ಭಾಗ್ಯನಗರವನ್ನಾಗಿ ಮಾಡುತ್ತೇವೆ ಆದರೆ ಇಸ್ತಾಂಬುಲ್ ಆಗಿ ಅಲ್ಲ" ಎಂದು ಹೇಳಿದ್ದಾರೆ.