ಕಲಬುರ್ಗಿ,ನ.24 (DaijiworldNews/HR): ಸಿಬಿಐ ಅಧಿಕಾರಿಗಳು ನನ್ನ ಮಗಳ ನಿಶ್ಚಿತಾರ್ಥದಂದೆ ನನಗೆ ನೋಟಿಸ್ ನೀಡಿದ್ದು, ಕರ್ನಾಟಕದಲ್ಲಿ ದ್ವೇಷದ ರಾಜಕಾರಣ ಮಿತಿಮೀರಿದೆ ಆದರೆ ನನಗೆ ತೊಂದರೆ ಕೊಟ್ಟವರು ಯಾವಾಗಲೂ ಖುಷಿಯಾಗಿರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, " ನಮ್ಮ ಇಡೀ ಕರ್ಮ್ನಾಟಕದಲ್ಲಿ ಯಾವ ಶಾಸಕರಿಗೂ ನೋಟಿಸ್ ನೀಡಿಲ್ಲ್, ಆದರೆ ನನಗೆ ಮಾತ್ರ ನೀಡಿದ್ದಾರೆ. ಬಿಜೆಪಿಯಿಂದ, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ದ್ವೇಷದ ರಾಜಕಾರಣವನ್ನು ನನ್ನೊಬ್ಬನ ಮೇಲೆ ಯಾಕೆ ಮಾಡುತ್ತಿದ್ದಾರೆ, ಅಷ್ಟೆ ಅಲ್ಲದೇ ನನ್ನ ಮಗಳ ನಿಶ್ಚಿತಾರ್ಥದ ದಿನವೇ ನೋಟಿಸ್ ಕೊಡುತ್ತಾರೆ ಅಂದರೆ ಅವರ ದ್ವೇಷ ಎಷ್ಟರಮಟ್ಟಿಗಿದೆ ಅನ್ನೋದು ಅರ್ಥವಾಗುತ್ತದೆ ಎಂದರು".
ಇನ್ನು "ಬಿಜೆಪಿಯವರು ಯಾವಾಗಲೂ ನನ್ನ ವಿರುದ್ಧ ದ್ವೇಷದ ರಾಜಕಾರಣವೇ ಮಾಡುತ್ತ ಬಂದಿದ್ದಾರೆ. ಎಫ್ಐಆರ್ ಹಾಕುವ ಜೊತೆಗೆ ನೋಟಿಸ್ ಸಹ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ರಾಜಕೀಯದ ಕುಮ್ಮಕ್ಕಿಲ್ಲದೆ ಸಿಬಿಐ ಅಧಿಕಾರಿಗಳು ಈ ರೀತಿ ವರ್ತಿಸುತ್ತಿರಲಿಲ್ಲ, ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ಆದರೆ ನ್ಯಾಯ ಸಮ್ಮತ ತನಿಖೆ ನಡೆಸಬೇಕು, ನಾನು ಕಾನೂನಿಗೆ ಗೌರವ ಕೊಡುತ್ತೇನೆ "ಎಂದು ಹೇಳಿದ್ದಾರೆ.