ಔರಂಗಬಾದ್,ನ.24 (DaijiworldNews/HR): ಮುಂದಿನ ಎರಡು-ಮೂರು ತಿಂಗಳೊಳಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಎಲ್ಲ ಸಿದ್ದತೆಗಳು ನಡೆಯುತ್ತಿದೆ ಎಂದು ಬಿಜೆಪಿ ಪಕ್ಷದ ಹಿರಿಯ ನಾಯಕ, ಕೇಂದ್ರ ಸಚಿವ ರಾವ್ಸಾಹೆಬ್ ದಾನ್ವೆ ಹೇಳಿದ್ದಾರೆ.
ಈ ಕುರಿತು ಔರಂಗಬಾದ್ ವಿಧಾನ ಪರಿಷತ್ ಚುನಾವಣೆ ಪ್ರಚಾರ ಅಭಿಯಾನದಲ್ಲಿ ಮಾತನಾಡಿದ ಅವರು, " ಕಾರ್ಯಕರ್ತರು ಎಂದಿಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಯೋಚಿಸಬಾರದು. ಮುಂಬರುವ ಎರಡು-ಮೂರು ತಿಂಗಳಲ್ಲಿ ನಾವು ಸರ್ಕಾರ ರಚಿಸುತ್ತೇವೆ" ಎಂದರು.
ಇನ್ನು ಎನ್ಸಿಪಿ ನಾಯಕ ಅಜಿತ್ ಪವಾರ್ ಬೆಂಬಲದೊಂದಿಗೆ ಕಳೆದ ವರ್ಷ ನ.23ರಂದು ದೇವೇಂದ್ರ ಫಡಣವೀಸ್ ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಸರ್ಕಾರ ಕೇವಲ 80 ಗಂಟೆ ಅಧಿಕಾರದಲ್ಲಿತ್ತು. ಇದಾಗಿ ಒಂದು ವರ್ಷದ ಬಳಿಕ ರಾವ್ಸಾಹೆಬ್ ದಾನ್ವೆ ಈ ಹೇಳಿಕೆ ನೀಡಿದ್ದಾರೆ.