ಬೆಂಗಳೂರು, ನ.24 (DaijiworldNews/HR): ಮಂಗಳವಾರ ಬೆಳ್ಳಂಬೆಳಗ್ಗೆ ಕೆಎಎಸ್ ಅಧಿಕಾರಿ ಸುಧಾಗೆ ಎಸಿಬಿ ಮತ್ತೆ ಶಾಕ್ ನೀಡಿದ್ದು, ಸುಧಾ ಅವರ ಆಪ್ತರ ಮನೆಗಳಿಗೆ ಒಟ್ಟು ಒಂಬತ್ತು ಕಡೆಗಳಲ್ಲಿ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಸುಧಾ ಅವರ ನಿವಾಸದ ಮೇಲೆ ನವೆಂಬರ್ 7ರಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಬೆಂಗಳೂರು, ಉಡುಪಿ ಸೇರಿದಂತೆ ಹಲವೆಡೆ ದಾಳಿ ನಡೆಸಿ ದಾಖಲೆಗಳು, ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಇದೀಗ ಇಂದು ಬೆಳಗ್ಗೆ ಮತ್ತೆ ಎಸಿಬಿ ಅಧಿಕಾರಿಗಳು ಕೆಎಎಸ್ ಅಧಿಕಾರಿ ಸುಧಾ ಅವರ ಆಪ್ತರ ಮನೆಗೆ ದಾಳಿ ನಡೆಸಿದೆ.