ನವದೆಹಲಿ, ನ. 23 (DaijiworldNews/SM): ಜಗತ್ತನ್ನೇ ತಲ್ಲಣ ಮೂಡಿಸಿದ್ದ ಕೊರೋನಾ ಸೋಂಕು ನಿಯಂತ್ರಣಕ್ಕೆ ಲಸಿಕೆ ತಯಾರಿಕಾ ಹಂತದಲ್ಲಿದೆ. ಈ ನಡುವೆ ಲಸಿಕೆಯ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್, "ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಕೋವಿಡ್ ಲಸಿಕೆ ತಯಾರಿಸುವ ಸಂಸ್ಥೆಗಳ ಬಗ್ಗೆ, ಅವುಗಳಲ್ಲಿ ಯಾವುದಕ್ಕೆ ಆದ್ಯತೆ ನೀಡಲಿದೆ ಮತ್ತು ಏಕೆ ಎಂಬುದರ ಕುರಿತು ಮಾಹಿತಿ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಯಾರಿಗೆ ಮೊದಲು ಲಸಿಕೆ ದೊರೆಯುತ್ತದೆ ಮತ್ತು ಅವುಗಳ ವಿತರಣೆಯ ತಂತ್ರಗಾರಿಕೆಯ ಬಗ್ಗೆ ತಿಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.