ಇಸ್ಲಾಮಾಬಾದ್, ನ.23 (DaijiworldNews/PY): ಎಲ್ಒಸಿ ಬಳಿ ಭಾರತೀಯ ಸೇನಾ ಪಡೆ ಕದನ ವಿರಾಮ ಉಲ್ಲಂಘಿಸಿ ಎಂಬ ಆರೋಪದಡಿ ಪಾಕಿಸ್ತಾನ ಸೋಮವಾರ ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಕರೆದು ಎಚ್ಚರಿಕೆ ನೀಡಿದೆ.
ಸಾಂದರ್ಭಿಕ ಚಿತ್ರ
ಪಾಕಿಸ್ತಾನ ವಿದೇಶಾಂಗ ಕಚೇರಿಯ ಮಾಹಿತಿಯ ಪ್ರಕಾರ, "ಎಲ್ಒಸಿಯ ಖುಯಿರಟ್ಟಾ ಸೆಕ್ಟರ್ನಲ್ಲಿ ಭಾನುವಾರ ನಡೆದ ಭಾರತೀಯ ಪಡೆಗಳು ನಡೆಸಿದ ವಿವೇಚನೆಯಿಲ್ಲದ ಹಾಗೂ ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ 11 ನಾಗರಿಕರು ಸಾವನ್ನಪ್ಪಿದ್ದಾರೆ" ಎಂದಿದೆ.
"ಈ ವರ್ಷ ಭಾರತವು 2,820 ಕದನ ವಿರಾಮ ಉಲ್ಲಂಘನೆ ಮಾಡಿದೆ. ಇದರ ಪರಿಣಾಮವಾಗಿ 26 ಸಾವುಗಳು ಮತ್ತು 245 ನಾಗರಿಕರಿಗೆ ಗಂಭೀರ ಗಾಯಗಳಾಗಿವೆ" ಎಂದು ಆರೋಪಿಸಿದೆ.
"2003ರ ಕದನ ವಿರಾಮ ಒಪ್ಪಂದವನ್ನು ಗೌರವಿಸಲು ಭಾರತೀಯರ ತಂಡವನ್ನು ಕರೆಯಲಾಗಿದ್ದು, ಭಾನುವಾರ ನಡೆದ ದಾಳಿ ಹಾಗೂ ನಿಯಂತ್ರಣ ರೇಖೆ ಹಾಗೂ ಗಡಿಯುದ್ದಕ್ಕೂ ಶಾಂತಿ ಕಾಪಾಡಿಕೊಳ್ಳಿ" ಎಂದು ಹೇಳಿಕೆಯಲ್ಲಿ ತಿಳಿಸಿದೆ.