ನವದೆಹಲಿ, ನ.23 (DaijiworldNews/HR): ದೆಹಲಿಯಲ್ಲಿ ಸಂಸದರ ವಾಸ್ತವ್ಯಕ್ಕಾಗಿ ನಿರ್ಮಿಸಿರುವ ನೂತನ 76 ವಸತಿಗಳ ಬಹುಮಹಡಿ ಸಮುಚ್ಚಯವನ್ನು ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದ್ದಾರೆ.
ಉದ್ಘಾಟನೆಯ ಬಳಿಕ ಮಾತನಾಡಿದ ಅವರು, " 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಮುಖ ಕಾಯ್ದೆಗಳನ್ನು ರೂಪಿಸಲಾಗಿದೆ. ಅನೇಕ ಕಾಮಗಾರಿಗಳು ಮುಗಿದಿವೆ. ದೇಶದ ಅಭಿವೃದ್ಧಿಯಲ್ಲಿ ಈ ಅವಧಿಯು ಐತಿಹಾಸಿಕವಾದುದು" ಎಂದರು.
"ಇನ್ನು ಯುವಜನರಿಗೆ 16 ರಿಂದ 18ರ ವಯೋಮಾನ ಮುಖ್ಯವಾದುದು, ಅಂತೆಯೇ ಭಾರತದಂಥ ಯುವ ದೇಶದ ಅಭಿವೃದ್ಧಿಯಲ್ಲಿ 16 ಮತ್ತು 18ನೇ ಲೋಕಸಭೆಯೂ ಮುಖ್ಯವಾದುದಾಗಲಿದೆ" ಎಂದರು.
"ನಮ್ಮ ಅವಧಿಯಲ್ಲಿ ನಾವಿನ್ನು ಸಾಧಿಸಬೇಕಾದದ್ದು ತುಂಬಾ ಇದೆ, ಆತ್ಮನಿರ್ಭರ ಭಾರತ್ ಅಭಿಯಾನ ಇರಬಹುದು, ಆರ್ಥಿಕತೆಯ ಗುರಿ ಇರಬಹುದು. ಪ್ರತಿಜ್ಞೆ ಮಾಡಿರುವ ಇಂಥ ಅನೇಕ ಸಾಧನೆಗಳನ್ನು ಈ ಅವಧಿಯಲ್ಲಿ ಮಾಡಬೇಕಾಗಿದೆ" ಎಂದು ಹೇಳಿದ್ದಾರೆ.