ಪುಣೆ,ನ.23 (DaijiworldNews/HR): ಮಹಾರಾಷ್ಟ್ರದ ಅಹ್ಮದನಗರ ಜಿಲ್ಲೆಯಮಹಿಳೆಯೊಬ್ಬರಿಗೆ ತನ್ನ ಪತಿ ಫೋನ್ನಲ್ಲಿಯೇ ಪತಿಯು ತ್ರಿವಳಿ ತಲಾಖ್ ನೀಡಿದ್ದಾರೆಂದು ಪತ್ನಿಯು ದೂರು ನೀಡಿದ್ದಾರೆ.
ಮಹಿಳೆಯ ದೂರಿನನ್ವಯ ಅಹ್ಮದನಗರದ ಭಿಂಗರ್ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯ ವಿರುದ್ಧ ಮುಸ್ಲಿಂ ಮಹಿಳಾ ಕಾಯ್ದೆ (ಮದುವೆ ಹಕ್ಕುಗಳ ರಕ್ಷಣೆ) ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಪತಿ ಮುಂಬೈನಲ್ಲಿ ವಾಸವಿದ್ದು, ನವೆಂಬರ್ 20 ರಂದು ಪತ್ನಿಗೆ ಕರೆ ಮಾಡಿ, ನಿನ್ನೊಂದಿಗೆ ನನಗೆ ಯಾವ ಸಂಬಂಧವೂ ಇಲ್ಲ. ನಿನ್ನ ಜೊತೆ ಸಹಜೀವನ ನಡೆಸಲು ಬಯಸುವುದಿಲ್ಲ ಎಂದು ಹೇಳಿ, ಫೋನ್ ಮೂಲಕವೇ ತ್ರಿವಾಳಿ ತಲಾಖ್ ನೀಡಿದ್ದಾರೆ ಎಂದು ಪತ್ನಿ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.