ಮುಂಬೈ, ನ.23 (DaijiworldNews/PY): "ಭಾರತ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ವಿಲೀನಗೊಂಡು ಒಂದು ದೇಶವಾಗಲಿ" ಎಂದು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಹೇಳಿದ್ದಾರೆ.
"ಒಂದು ವೇಳೆ ಭಾರತ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನವನ್ನು ಬಿಜೆಪಿ ವಿಲೀನಗೊಳಿಸಿ ಒಂದೇ ದೇಶವನ್ನಾಗಿ ಮಾಡಿದ್ದಲ್ಲಿ, ನಮ್ಮ ಪಕ್ಷ ಇದನ್ನು ಸ್ವಾಗತಿಸುತ್ತದೆ" ಎಂದಿದ್ದಾರೆ.
"ಕೇವಲ ಕರಾಚಿ ಮಾತ್ರವಲ್ಲ ಭಾರತದೊಂದಿಗೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಕೂಡಾ ವಿಲೀನವಾಗಲಿ. ಬರ್ಲಿನ್ ಗೋಡೆಯನ್ನೇ ಧ್ವಂಸ ಮಾಡಲಾಗುತ್ತದೆ ಎಂದರೆ, ಈ ಮೂರು ದೇಶಗಳನ್ನು ಕೂಡಾ ವಿಲೀನಗೊಳಿಸಬಹುದು" ಎಂದು ತಿಳಿಸಿದ್ದಾರೆ.