ಬೆಂಗಳೂರು, ನ.23 (DaijiworldNews/HR): ರಾಜ್ಯದ ಅಭಿವೃದ್ಧಿಗೆ ಹಣ ಸಂಗ್ರಹ ಆಗುತ್ತಿರುವುದು ಬೆಂಗಳೂರಿನ ಒಕ್ಕಲಿಗ ಸಮಾಜದಿಂದ ಹಾಗಾಗಿ ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಪ್ರಾಧಿಕಾರವನ್ನೇಕೆ ರಚನೆ ಮಾಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮರಾಠ ನಿಗಮ ರಚನೆ ಆಗುವುದು ಒಳ್ಳೆಯದು, ಅದನ್ನು ನಾವು ವಿರೋಧಿಸುವುದಿಲ್ಲ, ಆದರೆ ರಾಜ್ಯದ ಅಭಿವೃದ್ಧಿಗೆ ಹೆಚ್ಚು ತೆರಿಗೆ ಪಾವತಿ ಆಗುತ್ತಿರುವುದು ಬೆಂಗಳೂರಿನ ಒಕ್ಕಲಿಗ ಸಮಾಜದಿಂದ, ಅವರು ತಮ್ಮ ಕೃಷಿ ಭೂಮಿಯನ್ನು ಅಭಿವೃದ್ದಿಗೆ ಹಾಗೂ ಕೈಗಾರಿಕೆಗಳಿಗೆ ಕೊಟ್ಟು ಕೂಲಿ ಕಾರ್ಮಿಕರಾಗಿದ್ದಾರೆ ಹಾಗಾಗಿ ಮೊದಲಿಗೆ ಒಕ್ಕಲಿಗ ಪ್ರಾಧಿಕಾರ ರಚನೆ ಮಾಡಬೇಕಿತ್ತು ಎಂದರು.
ಇನ್ನು ನಮ್ಮ ರಾಜ್ಯದಲ್ಲಿ ಇದೀಗ ಭಾಷೆಗಳ ನಡುವೆ ಸಂಘರ್ಷ ಶುರುವಾಗಿದೆ, ಸರ್ಕಾರ ಕನ್ನಡಪರ ಸಂಘಟನೆಗಳನ್ನು ದಬ್ಬಾಳಿಕೆಯಿಂದ ಹದ್ದುಬಸ್ತಿನಲ್ಲಿ ತರಲು ಪ್ರಯತ್ನಿಸುತ್ತಿದೆ. ಇದೀಗ ಸರ್ಕಾರ ಮತಗಳನ್ನು ಪಡೆಯುವುದಕ್ಕಾಗಿ ಪ್ರಾಧಿಕಾರ ಮಾಡುತ್ತಿದೆ. ಪ್ರಾಧಿಕಾರ ರಚನೆಗಳನ್ನು ಮಾಡುವುದು ಕೇವಲ ತಾತ್ಕಾಲಿಕ ಅಷ್ಟೇ. ಮತಕ್ಕಾಗಿ ಪ್ರಾಧಿಕಾರ ರಚನೆ ಸರಿಯಲ್ಲ ಎಂದು ಹೇಳಿದ್ದಾರೆ.