ಮುಂಬೈ,ನ. 22 (DaijiworldNews/HR): ಡ್ರಗ್ಸ್ ಸೇವನೆ ಮತ್ತು ಸಂಗ್ರಹಣೆ ಆರೋಪದಲ್ಲಿ ಬಂಧಿತರಾಗಿರುವ ಬಾಲಿವುಡ್ನ ಖ್ಯಾತ ಹಾಸ್ಯನಟಿ ಭಾರ್ತಿ ಸಿಂಗ್ ಹಾಗೂ ಪತಿ ಹರ್ಷ್ ಲಿಂಬಾಚಿಯಾ ಅವರಿಗೆ ಡಿಸೆಂಬರ್ 4 ರವರೆಗೆ 14 ದಿನದ ನ್ಯಾಯಾಂಗ ಬಂಧನವನ್ನು ಮುಂಬೈನ ನ್ಯಾಯಾಲಯ ವಿಧಿಸಿದೆ.
ಎನ್ಸಿಬಿ ಅಧಿಕಾರಿಗಳು ಭಾರ್ತಿ ಸಿಂಗ್ ಅವರನ್ನು ಶನಿವಾರ ಬಂಧಿಸಿದ್ದು, 12 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಪತಿ ಹರ್ಷ್ ಅವರನ್ನೂ ಬಂಧಿಸಿದ್ದರು. ಶನಿವಾರ ಅವರ ಮನೆಯ ಮೇಲೆ ದಾಳಿ ನಡೆಸಿದಾಗ ಡ್ರಗ್ಸ್ ಪತ್ತೆಯಾಗಿತ್ತು.ಭಾರ್ತಿ ಸಿಂಗ್ ಹಾಗೂ ಅವರ ಪತಿ ತಾವು ಗಾಂಜಾ ಸೇವನೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಇನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಕಾಯ್ದೆಯಡಿ ಭಾರ್ತಿ ಸಿಂಗ್ ದಂಪತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.