ಉತ್ತರಪ್ರದೇಶ, ನ. 22 (DaijiworldNews/HR): ಮಥುರಾದ ಆಶ್ರಮವೊಂದರಲ್ಲಿ ಚಹಾ ಸೇವಿಸಿದ ನಂತರ ಇಬ್ಬರು ಸಾಧುಗಳು ಮೃತಪಟ್ಟು, ಮತ್ತೊಬ್ಬ ಸಾಧುವಿನ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.
ಮೃತ ಸಾಧುಗಳನ್ನು ಗುಲಾಬ್ ಸಿಂಗ್ (60 )ಮತ್ತು ಶ್ಯಾಮ್ ಸುಂದರ್ ಎಂದು ಗುರುತಿಸಲಾಗಿದೆ.
ಆಶ್ರಮದಲ್ಲಿ ಮೂವರು ಸಾಧುಗಳು ಚಹಾ ಸೇವನೆ ಮಾಡಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಇಬ್ಬರು ಸಾಧುಗಳು ನಿಗೂಢವಾಗಿ ಸಾವನ್ನಪ್ಪಿದ್ದು, ಗಂಭೀರವಾಗಿರುವ ಸಾಧುವನ್ನು ಮಥುರಾದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇನ್ನು ಸ್ಥಳಕ್ಕೆ ವಿಧಿವಿಜ್ಞಾನ ತಂಡ ಆಗಮಿಸಿದ್ದು ಸಾಕ್ಷ್ಯ ಕಲೆಹಾಕುವಲ್ಲಿ ನಿರತವಾಗಿದೆ. ಸಾಧುಗಳ ಸಾವಿಗೆ ಕಾರಣವೇನೆಂದು ಶೀಘ್ರದಲ್ಲಿ ಪತ್ತೆಹಚ್ಚಲಾಗುವುದೆಂದು ಮಥುರಾ ಎಸ್ ಎಸ್ ಪಿ ಗೌರವ್ ಗ್ರೋವರ್ ತಿಳಿಸಿದ್ದಾರೆ.