ನವದೆಹಲಿ, ನ. 22 (DaijiworldNews/MB) : ''ನಾಯಕತ್ವದ ಬಿಕ್ಕಟ್ಟು ಕಾಂಗ್ರೆಸ್ ಪಕ್ಷಕ್ಕಿಲ್ಲ'' ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
''ನಮ್ಮ ಪಕ್ಷದಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ. ಎಲ್ಲರೂ ಸೋನಿಯಾ ಮತ್ತು ರಾಹುಲ್ ಗಾಂಧಿಯವರಿಗೆ ಬೆಂಬಲ ನೀಡುತ್ತಿದ್ದಾರೆ'' ಎಂದರು.
ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತೀ ಕಡಿಮೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ವಿಚಾರದಲ್ಲಿ ಹಿರಿಯ ನಾಯಕರಾದ ಕಪಿಲ್ ಸಿಬಲ್ ಮತ್ತಿತರರು ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಮಾಧ್ಯಮದೊಂದಿಗೆ ಮಾತನಾಡಿದ ಸಂದರ್ಭ ಈ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಖುರ್ಷಿದ್, ''ಪಕ್ಷದ ಯಾವುದೇ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ, ಮನವಿ, ಟೀಕೆ ಸಲ್ಲಿಸಲು ಪಕ್ಷಕ್ಕೆ ಅದರದ್ದೆ ಆದ ವೇದಿಕೆ, ಅವಕಾಶವಿದೆ. ಅದನ್ನು ಬಿಟ್ಟು ಪಕ್ಷದ ಬಗ್ಗೆಗಿನ ಅಭಿಪ್ರಾಯವನ್ನು ಹೊರಗಡೆ ಹೇಳುವುದು ಬೇಸರ ಉಂಟು ಮಾಡಿದೆ'' ಎಂದು ಹೇಳಿದರು.