ಹೊಸಪೇಟೆ, ನ. 22 (DaijiworldNews/MB) : ''ಕೇಂದ್ರೀಯ ತನಿಖಾ ದಳ (ಸಿಬಿಐ) ಬಿಜೆಪಿಯ ಕೆಲಸ ಮಾಡುತ್ತಿದೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆರೋಪಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಗಣಿ ಜಿಲ್ಲೆ ಬಳ್ಳಾರಿಗೆ ಭೇಟಿ ನೀಡಿದ್ದು ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶಿವಕುಮಾರ್ ಅವರು ಸ್ವಾಗತಿಸಿದರು. ಬಳಿಕ ಬೈಕ್ ರ್ಯಾಲಿ ನಡೆದಿದ್ದು ಡಿ.ಕೆ. ಶಿವಕುಮಾರ್ ಅವರು ತಮ್ಮ ಪಕ್ಷದ ಕಾರ್ಯಕರ್ತರೊಬ್ಬರ ಬೈಕ್ನಲ್ಲಿ ತೆರಳಿದರು. ಈ ಮೆರವಣಿಗೆಯೂ ಸಾಯಿಲೀಲಾ ರಂಗಮಂದಿರದಲ್ಲಿ ಕೊನೆಗೊಂಡಿತು.
ಈ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಿವಕುಮಾರ್ ಅವರು, ''ಸಿಬಿಐ ವಿರುದ್ದ ಕಿಡಿಕಾರಿದರು. ಸಿಬಿಐ ಬಿಜೆಪಿಯ ಕೆಲಸ ಮಾಡುತ್ತಿದೆ'' ಎಂದು ಆರೋಪಿಸಿದರು.
''ಯಾರು ಏನೇ ಮಾಡಿದರೂ ನಾನು ಪಕ್ಷ ಸಂಘಟನೆಯಲ್ಲಿ ಕಾರ್ಯ ಪ್ರವೃತ್ತನಾಗಿರುವೆ. ಬಿಜೆಪಿಯು ಬೇರೆ ಯಾವುದೂ ದಾರಿ ಕಾಣದೆ ಈಗ ಸಿಬಿಐ ಮೂಲಕ ನನ್ನನ್ನು ಮಣಿಸಲು ಯತ್ನಿಸುತ್ತಿದೆ'' ಎಂದು ದೂರಿದರು.