ಜೈಪುರ,ನ. 22 (DaijiworldNews/HR): ರಾಜಸ್ಥಾನದ ಚುರು ಜಿಲ್ಲೆಯ ಸರ್ಕಾರಿ ಅನುದಾನಿತ ಗೋಶಾಲೆಯಲ್ಲಿ ಶಂಕಿತ ವಿಷಾಹಾರ ಸೇವಿಸಿ 78 ಹಸುಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ಒಟ್ಟು 78 ಹಸುಗಳು ಮೃತಪಟ್ಟಿದ್ದು, ಕೆಲವು ಕಾಯಿಲೆಗಳಿಂದ ಸಾವನ್ನಪ್ಪಿರುವ ಶಂಕೆ ಇದೆ ಎಂದು ಪಶು ಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಡಾ.ಜಗದೀಶ್ ತಿಳಿಸಿದ್ದಾರೆ.
ಇನ್ನು ಗೋಶಾಲೆಗೆ ಈಗಾಗಲೇ ಹಲವು ತಂಡಗಳು ಭೇಟಿ ನೀಡಿ, ಹಸುಗಳ ಸಾವಿನ ಬಗ್ಗೆ ತಪಾಸಣೆ ನಡೆಸಲಾಗುತ್ತಿವೆ. ಮೇವಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.