ರಾಮಗಡ, ನ. 22 (DaijiworldNews/HR): ರಾಮಗಡದಲ್ಲಿ ಅನುಕಂಪದ ನೆಲೆಯಲ್ಲಿ ಉದ್ಯೋಗ ಪಡೆಯುವ ಉದ್ದೇಶದಿಂದ ತನ್ನ ತಂದೆಯನ್ನೇ ಮಗ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಬಾರ್ಕಕಾನದ ಸೆಂಟ್ರಲ್ ಕೋಲ್ ಫೀಲ್ಡ್ ಲಿಮಿಟೆಡ್ನಲ್ಲಿ ಮುಖ್ಯ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಕೃಷ್ಣರಾಮ್ (55) ಎಂಬುವರನ್ನು ಗಂಟಲು ಕತ್ತರಿಸಿ ತನ್ನ ಮಗನೇ ಹತ್ಯೆ ಮಾಡಿದ್ದಾನೆ ಎಂದು ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿರುದ್ಯೋಗಿಯಾಗಿದ್ದ ಮಗ ಅನುಕಂಪದ ನೆಲೆಯಲ್ಲಿ ತಂದೆಯ ಉದ್ಯೋಗ ಪಡೆಯುವುದಕ್ಕಾಗಿ ಹಿರಿಯ ಮಗನಾದ ಆತ ತಂದೆಯನ್ನೇ ಹತ್ಯೆ ಮಾಡಿರುವುದಾಗಿ ತನಿಖೆಯ ವೇಳೆ ಗೊತ್ತಾಗಿದೆ ಎಂದು ಉಪ ವಿಭಾಗದ ಪೊಲೀಸ್ ಅಧಿಕಾರಿ ಪ್ರಕಾಶ್ ಚಂದ್ರ ಮಹ್ತೊ ಅವರು ಮಾಹಿತಿ ನೀಡಿದ್ದಾರೆ.
ಇನ್ನು ಆತ ಹತ್ಯೆಗೆ ಬಳಸಿದ್ದ ಚಾಕು ಮತ್ತು ಮೃತ ವ್ಯಕ್ತಿಯ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.