ಶ್ರೀನಗರ, ನ. 22 (DaijiworldNews/HR): ಪುಲ್ವಾಮಾದಲ್ಲಿ ಭಾರತೀಯ ಸೇನೆ ಮತ್ತು ಕಾಶ್ಮೀರ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವ ಉಗ್ರ ಮತ್ತು ಆತನಿಗೆ ಸಹಾಯ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಹಂದ್ವಾರದ ಮದ್ರಸಾದಲ್ಲಿ ಉಗ್ರ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಯೊಬ್ಬ ಇದ್ದಾನೆ ಎಂದು ಮಾಹಿತಿ ತಿಳಿದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಓರ್ವ ಉಗ್ರನನ್ನು ನಿನ್ನೆ ಬಂಧಿಸಿದ್ದು, ಇಂದು ಆತ ನೀಡಿದ ಮಾಹಿತಿ ಮೇರಗೆ ಆತನಿಗೆ ನೆರವು ನೀಡುತ್ತಿದ್ದ ಮತ್ತೋರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಇನ್ನು ಸೇನೆಯು ನಿನ್ನೆ ನಡೆಸಿದ ಕಾರ್ಯಚರಣೆಯ ವೇಳೆ ಓರ್ವ ಉಗ್ರನನ್ನು ಬಂಧಿಸಿದ್ದು, ಆತ ಕೊಟ್ಟ ಮಾಹಿತಿಯ ಮೇರೆಗೆ ಮತ್ತೋರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.