ನವದೆಹಲಿ, ನ. 22 (DaijiworldNews/MB) : ದೆಹಲಿ, ಮುಂಬೈ, ಕೋಲ್ಕತಾ ಹಾಗೂ ಚೆನ್ನೈ ನಾಲ್ಕು ಮೆಟ್ರೋ ನಗರಗಳಲ್ಲಿ ತೈಲ ಮಾರುಕಟ್ಟೆ ಕಂಪೆನಿಗಳು ಸತತ ಮೂರನೇ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಿವೆ ಎಂದು ವರದಿ ತಿಳಿಸಿದೆ.
ರ ಹೆಚ್ಚಳವು ನವೆಂಬರ್ 22ರ ಬೆಳಗ್ಗೆ ಆರು ಗಂಟೆಗೆ ಜಾರಿಗೆ ಬರಲಿದ್ದು ಪ್ರಸ್ತುತ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 81.46 ರೂ., ಡೀಸೆಲ್ ಬೆಲೆ 71.07 ರೂ., ಮುಂಬೈನಲ್ಲಿ ಪೆಟ್ರೋಲ್ ದರ 88.16 ಹಾಗೂ ಡೀಸೆಲ್ ದರ 77.54 ಆಗಿದೆ.
ಪೆಟ್ರೋಲ್ನ ಬೆಲೆ ಪ್ರತಿ ಲೀಟರ್ಗೆ 8 ಪೈಸೆ, ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 18ರಿಂದ 20 ಪೈಸೆ ಏರಿಕೆಯಾಗಿದೆ. ಇಂದು ಏರಿಕೆಯಾದ ದರವನ್ನು ಸೇರಿಸಿ ಮೂರು ದಿನಗಳಲ್ಲಿ ಪೆಟ್ರೋಲ್ ಬೆಲೆ ಒಟ್ಟು 40 ಪೈಸೆ ಹಾಗೂ ಡೀಸೆಲ್ ಬೆಲೆ 61 ಪೈಸೆ ಅಧಿಕವಾಗಿದೆ ಎಂದು ವರದಿಯಾಗಿದೆ.