ಪಾಟ್ನಾ, ನ. 22 (DaijiworldNews/HR): ಬಿಹಾರದ ಗಯಾ ಜಿಲ್ಲೆಯ ಬಾರಾಚಟ್ಟಿಯಲ್ಲಿ ಇಂದು ನಸುಕಿನ ಜಾವ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿ ಮೂವರು ನಕ್ಸಲರನ್ನು ಹೊಡೆದುರುಳಿಸಿ ,ಎಕೆ ಸರಣಿಯ ಆಕ್ರಮಣಕಾರಿ ರೈಫಲ್ ಮತ್ತು ಐಎನ್ಎಸ್ಎಎಸ್ ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಸಾಂಧರ್ಭಿಕ ಚಿತ್ರ
ನಕ್ಸಲರು ಇರುವ ಬಗ್ಗೆ ಖಚಿತ ಮಾಹಿತಿ ಪಡೆದು ಬಳಿಕ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗೆ ಅರಣ್ಯ ಪ್ರದೇಶದಲ್ಲಿ ನಕ್ಸಲರು ಸಿಕ್ಕಿದ್ದು, ಗುಂಡಿನ ದಾಳಿ ಆರಂಭಿಸಿದ್ದು, ಮೂವರು ನಕ್ಸಲರ ಶವ ಪತ್ತೆಯಾಗಿದೆ.
ಇನ್ನು ಕೋಬ್ರಾ 205 ನೇ ಬೆಟಾಲಿಯನ್ ನೇತೃತ್ವದಲ್ಲಿ ಎನ್ ಕೌಂಟರ್ ನಡೆಸಲಾಗಿದ್ದು, ಬಿಹಾರ ಪೊಲೀಸ್ ಸಿಬ್ಬಂದಿಯ ಸಹಯೋಗದೊಂದಿಗೆ ಕಾರ್ಯಾಚರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.