ಮುಂಬೈ, ನ. 22 (DaijiworldNews/HR): ಖ್ಯಾತ ಹಾಸ್ಯ ನಟಿ ಭಾರ್ತಿ ಸಿಂಗ್ ಅವರ ಮನೆಗೆ ದಾಳಿ ನಡೆಸಿದ್ದ ಎನ್ಸಿಬಿ ಅಧಿಕಾರಿಗಳು ನಿನ್ನೆ ಅವರನ್ನು ಬಂಧಿಸಿದ್ದು, ಇದೀಗ ಅವರ ಪತಿ ಹರ್ಚ್ ಲಿಂಬಾಚಿಯರನ್ನು ಕೂಡಾ ಬಂಧಿಸಿದ್ದಾರೆ.
ಭಾರತಿ ಸಿಂಗ್ ಮನೆಗೆ ನಿನ್ನೆ ದಾಳಿ ನಡೆಸಿದ್ದ ಎನ್ಸಿಬಿ ಅಧಿಕಾರಿಗಳು 86.5 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಭಾರತಿ ಹಾಗೂ ಅವರ ಪತಿ ಹರ್ಷ್ ಲಿಂಬಾಚಿಯಾ ತಾವು ಡ್ರಗ್ ಸೇವಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದು, ಬಳಿಕ ಭಾರತಿ ಅವರನ್ನು ಶನಿವಾರ ಬಂಧಿಸಲಾಗಿದ್ದು ಇಂದು ಹರ್ಚ್ ಲಿಂಬಾಚಿಯರನ್ನು ಬಂಧಿಸಿದ್ದಾರೆ.
ಇನ್ನು ಜೂನ್ನಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬಳಿಕ ಎನ್ಸಿಬಿ ಬಾಲಿವುಡ್ನಲ್ಲಿ ಮಾದಕ ದ್ರವ್ಯ ಸೇವನೆ ನಡೆಸುತ್ತಿರುವ ಬಗ್ಗೆ ವಾಟ್ಸಾಪ್ ಚಾಟ್ಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.