ನವದೆಹಲಿ, ನ. 22 (DaijiworldNews/MB) : ''ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಕೊರೊನಾ ಸೋಂಕನ್ನು ಯಶಸ್ವಿಯಾಗಿ ಎದುರಿಸಿದೆ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
''ಪಳನಿಸ್ವಾಮಿ-ಪನ್ನೀರ್ ಸೆಲ್ವಂ ನೇತೃತ್ವದ ತಮಿಳುನಾಡು ಸರ್ಕಾರವು ಕೊರೊನಾ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿದೆ'' ಎಂದು ಶ್ಲಾಘಿಸಿದ ಅವರು, ''ಕೊರೊನಾ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪಾಲನೆ ಅತ್ಯವಶ್ಯಕ'' ಎಂದು ಹೇಳಿದರು.
''ವಿಶ್ವದಲ್ಲಿ ಇತರೆ ರಾಷ್ಟ್ರಗಳನ್ನು ಹೋಲಿಕೆ ಮಾಡಿ ನೋಡಿದರೆ ಭಾರತವು ಕೊರೊನಾವನ್ನು ಯಶಸ್ವಿಯಾಗಿ ಎದುರಿಸಿದೆ. ಅಭಿವೃದ್ದಿ ಹೊಂದಿದ ದೇಶಕ್ಕಿಂತಲೂ ನಮ್ಮ ಭಾರತವು ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಈ ಕೊರೊನಾ ವಿರುದ್ದದ ಹೋರಾಟದಲ್ಲಿ 130 ಕೋಟಿ ಜನ ಒಂದಾಗಿದ್ದಾರೆ'' ಎಂದರು.