ಮುಂಬೈ, ನ.21 (DaijiworldNews/HR): ಮಹಾರಾಷ್ಟ್ರದಲ್ಲಿ ಲವ್ ಜಿಹಾದ್ ನಿಯಂತ್ರಿಸುವಂಥ ಯಾವುದೇ ಕಾನೂನಿನ ಅವಶ್ಯಕತೆ ಇಲ್ಲ ಯಾಕೆಂದರೆ ಮಹಾರಾಷ್ಟ್ರ ಸರ್ಕಾರ ದಕ್ಷತೆಯಿಂದ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯ ಸಂಪುಟ ಸಹೋದ್ಯೋಗಿ ಅಸ್ಲಾಮ್ ಶೇಖ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತಾತ್ಮಕ ಕೊರತೆ ಇದ್ದಾಗ ಇಂಥಹ ಕಾನೂನುಗಳನ್ನು ಜಾರಿಗೆ ತರಬೇಕು, ಆದರೆ ಮಹಾರಾಷ್ಟ್ರ ಸರ್ಕಾರ ಸಮರ್ಪಕವಾಗಿ ಕೆಲಸ ಮಾಡುತ್ತಿದೆ. ಲವ್ ಜಿಹಾದ್ ನಿಯಂತ್ರಿಸುವಂಥ ಯಾವುದೇ ಕಾನೂನುಗಳನ್ನು ಜಾರಿ ತರುವ ಅವಶ್ಯಕತೆ ಇಲ್ಲ ಎಂದರು.
ಇನ್ನು ರಾಜ್ಯ ಸರ್ಕಾರ ಸಂವಿಧಾನ ಬದ್ಧವಾಗಿಯೇ ಕಾರ್ಯನಿರ್ವಹಿಸುತ್ತಿದ್ದು, ಅಸಂಬದ್ಧ ಸಂಗತಿಗಳ ಬಗ್ಗೆ ಅದು ಆಲೋಚಿಸುವುದಿಲ್ಲ, ಯಾವುದೇ ಧರ್ಮವನ್ನೂ ಅನುಸರಿಸಬಹುದು, ಯಾವ ಧರ್ಮದವರನ್ನೂ ಬೇಕಾದರೂ ವಿವಾಹವಾಗಲು ಸಂವಿಧಾನ ಅನುಮತಿಸಿದೆ ಎಂದು ಹೇಳಿದ್ದಾರೆ.