ಚೆನ್ನೈ,ನ.21 (DaijiworldNews/HR): ಆನ್ಲೈನ್ ಗೇಮ್ಗಳಲ್ಲಿ ಬೆಟ್ಟಿಂಗ್ ದಂಧೆಗೆ ಸಿಲುಕಿ ತಾವು ಡುಡಿದ ಹಣವನ್ನೆಲ್ಲಾ ಅದಕ್ಕೆ ಉಪಯೋಗಿಸಿ ನಷ್ಟ ಅನುಭವಿಸಿ ಬಳಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಆನ್ಲೈನ್ ಗೇಮ್ ಗಳನ್ನು ನಿಷೇಧಿಸಿ ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.
ಈ ಸುಗ್ರೀವಾಜ್ಞೆಯನ್ನು ತಮಿಳುನಾಡು ಗವರ್ನರ್ ಬನ್ವರಿಲಾಲ್ ಪುರೋಹಿತ್ ಹೊರಡಿಸಿದ್ದು, ಗೇಮಿಂಗ್ ಕಾಯ್ದೆ 1930, ಚೆನ್ನೈ ನಗರ ಪೊಲೀಸ್ ಕಾಯ್ದೆ- 1888, ಚೆನ್ನೈ ಜಿಲ್ಲಾ ಪೊಲೀಸ್ ಕಾಯ್ದೆ-1859 ಗಳಿಗೆ ತಿದ್ದುಪಡಿ ಮಾಡಿ ಈ ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಆನ್ಲೈನ್ ಬೆಟ್ಟಿಂಗ್ ಗೇಮ್ ಆಡುವವರಿಗೆ 5000 ರೂ. ದಂಡ , 6 ತಿಂಗಳುಗಳ ಕಾಲ ಜೈಲು ಶಿಕ್ಷೆ ಹಾಗೂ ಅಂಗಡಿಗಳಲ್ಲಿ ಗೇಮ್ ಆಡಿಸುವವರಿಗೆ 10000 ರೂ. ದಂಡ , 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲಾಗಿದೆ.