ಬೆಂಗಳೂರು, ನ. 21 (DaijiworldNews/MB) : ರಾಜ್ಯ ಸರ್ಕಾರ 2021ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಭಾನುವಾರ, ಎರಡು ಮತ್ತು ನಾಲ್ಕನೇ ಶನಿವಾರವನ್ನು ಹೊರತುಪಡಿಸಿ 2021ನೇ ಸಾಲಿನಲ್ಲಿ ಒಟ್ಟು 20 ದಿನಗಳ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ಹಾಗೆಯೇ ಭಾನುವಾರ, ಎರಡು ಮತ್ತು ನಾಲ್ಕನೇ ಶನಿವಾರದಂದು ಬರುವ ಕೆಲವು ಹಬ್ಬ ಅಥವಾ ಇತರೆ ರಜಾಗಳನ್ನು ಪ್ರತ್ಯೇಕವಾಗಿ ರಜೆ ಎಂದು ಪರಿಗಣಿಸಲಾಗಿಲ್ಲ. ಇನ್ನು ಸರ್ಕಾರ ನೀಡಿರುವ ಸಾರ್ವತ್ರಿಕ ರಜೆ ದಿನದಂದೇಮುಸ್ಲಿಂ ಬಾಂಧವರ ಹಬ್ಬಗಳು ಆಚರಿಸಲಾಗುತ್ತಿಲ್ಲವಾದ್ದಲ್ಲಿ ಸಂದರ್ಭಕ್ಕನುಸಾರವಾಗಿ ಬದಲಾವಣೆಗೆ ಅವಕಾಶವಿದೆ.
2021ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಇಂತಿದೆ,
1. ಜನವರಿ 14 (ಗುರುವಾರ), ಉತ್ತರಾಯಣ ಪುಣ್ಯ ಕಾಲ, ಮಕರ ಸಂಕ್ರಾಂತಿ
2. ಜನವರಿ 26 (ಮಂಗಳವಾರ), ಗಣರಾಜ್ಯೋತ್ಸವ
3. ಮಾರ್ಚ್ 11(ಗುರುವಾರ), ಮಹಾ ಶಿವರಾತ್ರಿ
4. ಏಪ್ರಿಲ್ 2 (ಶುಕ್ರವಾರ), ಗುಡ್ ಫ್ರೈಡೇ
5. ಏಪ್ರಿಲ್ 13 (ಮಂಗಳವಾರ), ಯುಗಾದಿ
6. ಏಪ್ರಿಲ್ 14 (ಬುಧವಾರ), ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ
7. ಮೇ 1(ಶನಿವಾರ), ಕಾರ್ಮಿಕ ದಿನಾಚರಣೆ
8. ಮೇ 14 (ಶುಕ್ರವಾರ), ಬಸವ ಜಯಂತಿ/ಅಕ್ಷಯ ತೃತೀಯ/ ಖುತುಬ್ ಎ ರಂಜಾನ್
9. ಜುಲೈ 21 (ಬುಧವಾರ), ಬಕ್ರೀದ್
10. ಆಗಸ್ಟ್ 20 (ಶುಕ್ರವಾರ), ಮೊಹರಂ ಕಡೇ ದಿನ
11. ಸೆಪ್ಟೆಂಬರ್ 10 (ಶುಕ್ರವಾರ), ವರ ಸಿದ್ಧಿವಿನಾಯಕ ವ್ರತ
12. ಅಕ್ಟೋಬರ್ 2 (ಶನಿವಾರ), ಗಾಂಧಿ ಜಯಂತಿ
13. ಅಕ್ಟೋಬರ್ 6 (ಬುಧವಾರ), ಮಹಾಲಯ ಅಮವಾಸ್ಯೆ
14. ಅಕ್ಟೋಬರ್ 14 (ಗುರುವಾರ), ಮಹಾ ನವಮಿ, ಆಯುಧ ಪೂಜೆ
15. ಅಕ್ಟೋಬರ್ 15 (ಶುಕ್ರವಾರ), ವಿಜಯ ದಶಮಿ
16. ಅಕ್ಟೋಬರ್ 20 (ಬುಧವಾರ), ಮಹರ್ಷಿ ವಾಲ್ಮೀಕಿ ಜಯಂತಿ, ಈದ್ ಮಿಲಾದ್
17. ನವೆಂಬರ್ 1(ಸೋಮವಾರ), ಕನ್ನಡ ರಾಜ್ಯೋತ್ಸವ
18. ನವೆಂಬರ್ 3 (ಬುಧವಾರ), ನರಕ ಚತುರ್ದಶಿ
19. ನವೆಂಬರ್ 5 (ಶುಕ್ರವಾರ), ಬಲಿ ಪಾಡ್ಯಮಿ, ದೀಪಾವಳಿ
20. ನವೆಂಬರ್ 22 (ಸೋಮವಾರ) ಕನಕದಾಸ ಜಯಂತಿ