ನವದೆಹಲಿ, ನ.21 (DaijiworldNews/PY): ಕೃಷಿ ಮಸೂದೆಗಳಿಗೆ ಸಂಬಂಧಿಸಿದಂತೆ ಶಿರೋಮಣಿ ಅಕಾಲಿದಳ ಬಿಜೆಪಿ ನೇತೃತ್ವದ ಎನ್ಡಿಎಯಿಂದ ಹೊರಕ್ಕೆ ಬಂದ ಹಲವು ದಿನಗಳ ಬಳಿಕ ಮಾಜಿ ಸಚಿವ ಹಾಗೂ ಪಕ್ಷದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾಗೆ ನೀಡಿರುವ ಝೆಡ್ ಪ್ಲಸ್ ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಾಸ್ಸು ಪಡೆದುಕೊಂಡಿದೆ.
ಕೇಂದ್ರ ಸರ್ಕಾರದ ಈ ನಡೆಯನ್ನು ಖಂಡಿಸಿರುವ ಅಕಾಲಿದಳ, ನಮ್ಮ ಪಕ್ಷ ಕೇಂದ್ರದ ಕೃಷಿ ಮಸೂದೆಯನ್ನು ವಿರೋಧಿಸಿ ರೈತರ ಪರ ನಿಂತಿರುವುದಕ್ಕೆ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಇದು ಸರ್ವಾಧಿಕಾರ ಹೆಜ್ಜೆ ಎಂದು ಹೇಳಿದೆ.
ಮಜಿಥಿಯಾಗೆ ನೀಡಿರುವ ಝೆಡ್-ಪ್ಲಸ್ ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಾಸ್ಸು ಪಡೆದುಕೊಂಡ ಬಳಿಕ ಅವರಿಗೆ ಭದ್ರತೆ ನೀಡುವ ಜವಾಬ್ದಾರಿ ಪೊಲೀಸರ ಮೇಲಿದೆ.