ಬೆಳಗಾವಿ,ನ.21 (DaijiworldNews/HR): ಕೇಂದ್ರ ಸರ್ಕಾರವು ಕೊರೊನಾ ಲಸಿಕೆ ಕುರಿತು ಮೂರನೇ ಹಂತದ ಪರೀಕ್ಷೆ ನಡೆಸುತ್ತಿರುವ ಕಂಪನಿಗಳೊಂದಿಗೆ ಸಮಲೋಚನೆ ನಡೆಸಿದ್ದು, ವಿಶ್ವ ಆರೋಗ್ಯ ಸಂಸ್ಥೆ(ಡಬ್ಲುಎಚ್ ಒ) ಘೋಷಿಸುವ ಕೊರೊನಾ ಲಸಿಕೆಯನ್ನೇ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಲಸಿಕೆ ಅಧಿಕೃತವಾಗಿ ಬಿಡುಗಡೆಯಾಗಿಲ್ಲ, ಆದರೆ ಸಿದ್ದಪಡಿಸುವ ಕಂಪನಿಗಳೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದ್ದು, ಸದ್ಯದಲ್ಲೇ ದೇಶಕ್ಕೆ ಲಸಿಕೆ ಸಿಗಲಿದ್ದು, ಈ ಕುರಿತು ಈಗಾಗಲೇ ಕೇಂದ್ರ ಆರೋಗ್ಯ ಸಚಿವರ ಜತೆಗೆ ವಿಡಿಯೋ ಕಾನ್ಪರೆನ್ಸ್ ಮಾಡಲಾಗಿದೆ ಎಂದರು.
ಬಳಿಕ ಸಚಿವ ಸ್ಥಾನದ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಂದಿರುವವ್ರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ನನಗಿದೆ, ಮುಖ್ಯಮಂತ್ರಿಯವರು ಮತ್ತು ಪಕ್ಷದವರು ಕೊಟ್ಟ ಮಾತಿನಂತೆ ನಡೆಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.