ಮುಂಬೈ, ನ. 21 (DaijiworldNews/MB) : ಹಿಂದಿಯ ಜನಪ್ರಿಯ ಕಾಮಿಡಿಯನ್ ಭಾರ್ತಿ ಸಿಂಗ್ನ ಮುಂಬೈಯಲ್ಲಿರುವ ನಿವಾಸದ ಮೇಲೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ(ಎನ್ಸಿಬಿ) ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ.
ಮಾದಕವಸ್ತುಗಳನ್ನು ಭಾರ್ತಿ ಸಿಂಗ್ ಮತ್ತು ಆಕೆಯ ಪತಿ ಸೇವಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಮಾಡಿದ್ದಾರೆ ಎಂದು ವರದಿಯಾಗಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ನಲ್ಲಿ ಡ್ರಗ್ಸ್ ಸೇವನೆ, ಮಾಫಿಯಾ ಬಗ್ಗೆ ತನಿಖೆ ನಡೆಯುತ್ತಿದ್ದು ಹಲವು ನಟರನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ.