ಬೆಂಗಳೂರು, ನ.21 (DaijiworldNews/PY): ರಾತ್ರಿಯ ಸಂದರ್ಭ ಚೆಕ್ಪೋಸ್ಟ್ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಭಾರೀ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಮುಂಬೈ ನಿವಾಸಿ ದಳಪತಿ ಸಿಂಗ್ (34) ಹಾಗೂ ರಾಜಸ್ಥಾನ್ ನಿವಾಸಿ ವಿಕಾಸ್ (35) ಎಂದು ಗುರುತಿಸಲಾಗಿದೆ.
ಪೊಲೀಸರು ದೊಡ್ಡಪೇಟೆ ವೃತ್ತದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಆಕ್ಟಿವಾ ವಾಹನವನ್ನು ತಡೆದು ತಪಾಸಣೆ ನಡೆಸಿದ ವೇಳೆ ಅಕ್ರಮ ಚಿನ್ನಾಭರಣ ಮಾರಾಟದ ವಿಚಾರ ತಿಳಿದುಬಂದಿದೆ. ಆರೋಪಿಗಳು ಯಾವುದೇ ರೀತಿಯಾದ ದಾಖಲೆಗಳಿಲ್ಲದೇ ಭಾರೀ ಮೌಲ್ಯದ ಚಿನ್ನಾಭರಣವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು.
ಘಟನೆಯ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.