ಬೆಂಗಳೂರು, ನ. 21 (DaijiworldNews/MB) : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಿಬಿಐ ಮತ್ತೆ ಸಮನ್ಸ್ ಜಾರಿ ಮಾಡಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ನ.23ರಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನ.19ರಂದು ಸಮನ್ಸ್ ನೀಡಿದೆ ಎಂದು ವರದಿಯಾಗಿದೆ.
ಇನ್ನು ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಅಕ್ಟೋಬರ್ 5 ರಂದು ನನ್ನ ನಿವಾಸದ ಮೇಲೆ ನಡೆದಿದ್ದ ದಾಳಿ ಸಂಬಂಧ ನನಗೆ ನ.19 ರಂದು ಸಮನ್ಸ್ ಜಾರಿಯಾಗಿದ್ದು ನಿಜ. ನವೆಂಬರ್ 23 ರಂದು ಹಾಜರಾಗಲು ಸೂಚಿಸಿದ್ದಾರೆ'' ಎಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ನ.19ರಂದು ಮಗಳ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದರಿಂದ ಸಿಬಿಐ ಕಚೇರಿಗೆ ಡಿಕೆಶಿ ಹಾಜರಾಗಲಾಗಲಿಲ್ಲ ಎಂದು ಹೇಳಲಾಗಿದೆ.