ಬೆಂಗಳೂರು, ನ. 21 (DaijiworldNews/MB) : ''ಬಲವಂತದಲ್ಲಿ ಬಂದ್ ಮಾಡಲು ನಾನು ಬಿಡಲ್ಲ. ಹಾಗೆಯೇ ಬಂದ್ ನೆಪದಲ್ಲಿ ಪ್ರತಿಭಟನಕಾರರು ಪ್ರತಿಕೃತಿ ದಹನ ಮಾಡುವುದು, ಕೆಟ್ಟದಾಗಿ ನಡೆದುಕೊಳ್ಳುವುದು ಮಾಡಿದರೆ ಅವರು ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು'' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಮರಾಠ ಅಭಿವೃದ್ದಿ ನಿಗಮದ ವಿರುದ್ದ ಕನ್ನಡ ಪರ ಸಂಘಟನೆಗಳು ಕರೆಕೊಟ್ಟಿರುವ ಬಂದ್ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಶಾಂತಿಯುತವಾಗಿ ಅವರು ಪ್ರತಿಭಟನೆ ಮಾಡಲಿ. ಅದನ್ನು ಬಿಟ್ಟು ಬಂದ್ ಮಾಡಲು ಮುಂದಾದರೆ ಅದಕ್ಕೆ ಅವಕಾಶ ಮಾಡಿಕೊಡಲಾರೆವು. ಪ್ರತಿಭಟನೆ ಮಾಡಲು ಬೇರೆ ಸ್ವರೂಪಗಳು ಇದೆ. ಎಲ್ಲಾ ವಿಷಯಕ್ಕೂ ಬಂದ್ ಮಾಡುವುದನ್ನು ಸರಿಯಲ್ಲ, ಜನರು ಕೂಡಾ ಇದನ್ನು ಒಪ್ಪಲ್ಲ'' ಎಂದು ಹೇಳಿದರು.
''ಸರ್ಕಾರ ಈವರೆಗೂ ಯಾರ ಮಧ್ಯೆಯೂ ಭೇಡ ಭಾವ ಮಾಡಿಲ್ಲ. ಜನರು ಸರ್ಕಾರದ ಉದ್ದೇಶವನ್ನು ಅರಿತು ಸಹಕರಿಸಬೇಕು. ನಮ್ಮ ಸರ್ಕಾರ ಕನ್ನಡಿಗರ ಪರವಾದ ಸರ್ಕಾರ. ಕನ್ನಡಿಗರಿಗೆ ಬೇಕಾದ ಅಧಿಕ ಸೌಲಭ್ಯ ಕಲ್ಪಿಸಲು ನಾನು ಸಿದ್ದ'' ಎಂದು ಹೇಳಿದರು.