ಬೆಂಗಳೂರು, ನ.21 (DaijiworldNews/PY): ಪುಲಕೇಶಿ ನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಭೇಟಿಯಾದರು.
ಈ ಸಂದರ್ಭ ಸಖಂಡ ಶ್ರೀನಿವಾಸಮೂರ್ತಿ ಹಾಗೂ ಡಿ.ಕೆ.ಶಿವಕುಮಾರ್ ಅವರು ಪ್ರಕರಣದ ವಿಚಾರವಾಗಿ ಚರ್ಚೆ ನಡೆಸಿದರು.
ಚರ್ಚೆ ನಡೆದ ಬಳಿಕ ಮಾತನಾಡಿದ ಡಿಕೆಶಿ, "ಅಖಂಡ ಶ್ರೀನಿವಾಸ್ ಅವರು ಬೆಂಗಳೂರು ಗಲಭೆಯ ಸಂದರ್ಭ ತಮಗಾದ ನೋವನ್ನು ತಿಳಿಸಿದ್ದಾರೆ. ನನಗೂ ಕೂಡಾ ಅವರ ಸಂಕಷ್ಟ ಅರ್ಥವಾಗುತ್ತದೆ. ಖಂಡಿತವಾಗಿಯೂ ಅವರಿಗೆ ನ್ಯಾಯ ದೊರಕಿಸಿಕೊಡುವಂತ ಕಾರ್ಯ ಮಾಡುತ್ತೇನೆ" ಎಂದರು.
"ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ಕುಮಾರ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಡಿ.ಕೆ.ಶಿವಕುಮಾರ್ ಅವರೇ, ಇನ್ನಾದರು ನನಗೆ ನ್ಯಾಯ ದೊರಕಿಸಿ ಕೊಡಿ" ಎಂದು ಅಖಂಡ ಶ್ರೀನಿವಾಸ ಮೂರ್ತಿ ಅವರು ಹೇಳಿದ್ದರು.