ಜೈಪುರ, ನ.21 (DaijiworldNews/PY): 2015ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದ ಟೀನಾ ಡಾಬಿ ಹಾಗೂ ಅವರ ಪತಿ ಅಥರ್ ಖಾನ್ ವಿಚ್ಛೇದನ ಪಡೆದುಕೊಳ್ಳಲು ತೀರ್ಮಾನಿಸಿದ್ದಾರೆ.
ಈ ಜೋಡಿಗೆ 2018ರಲ್ಲಿ ವಿವಾಹವಾಗಿತ್ತು. ಪರಸ್ಪರ ಒಪ್ಪಿಗೆಯ ಮೇರೆಗೆ ದಂಪತಿಗಳು ಜೈಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಕಾಶ್ಮೀರ ಮೂಲದವರಾದ ಅಥರ್ ಖಾನ್ ಅವರು 2015ನೇ ಸಾಲಿನ ಐಎಎಸ್ ಪರೀಕ್ಷೆಯಲ್ಲಿ ಎರಡನೇ ರ್ಯಾಂಕ್ ಪಡೆದುಕೊಂಡಿದ್ದರು. ತರಬೇತಿಯ ವೇಳೆ ಟೀನಾ ಹಾಗೂ ಅಥರ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗುತ್ತಿದ್ದು, ಟೀನಾ ಹಾಗೂ ಅಥರ್ ಸದ್ಯ ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಟೀನಾ ಹಾಗೂ ಅಥರ್ ಖಾನ್ ಅವರು ಅಂತರ್ಧರ್ಮೀಯರಾದ್ದರಿಂದ ಹಲವಾರು ರಾಜಕೀಯ ನಾಯಕರು ಈ ಜೋಡಿಯನ್ನು ಶ್ಲಾಘಿಸಿದ್ದರು. ಹಿಂದೂ ಮಹಾಸಭಾ ಇದನ್ನು ಲವ್ಜಿಹಾದ್ ಎಂದು ಹೇಳಿತ್ತು.
ಟೀನಾ ಹಾಗೂ ಅಥರ್ ನ.17ರಂದು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.