ಬೆಂಗಳೂರು, ನ. 21 (DaijiworldNews/MB) : ಡ್ರಗ್ ಜಾಲಕ್ಕೆ ಸಹಕರಿಸುತ್ತಿದ್ದ ಆರೋಪದಲ್ಲಿ ಸದಾಶಿವನಗರ ಠಾಣೆ ಹೆಡ್ ಕಾನ್ಸ್ಟೆಬಲ್ ಪ್ರಭಾಕರ್ ಅವರನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಸಿಬಿ ಅಧಿಕಾರಿಯೊಬ್ಬರು, ''ಪೊಲೀಸರ ತನಿಖೆಯ ಕುರಿತಾಗಿ ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಬಂಧಿತ ಪ್ರಭಾಕರ್ ಮಾಹಿತಿ ನೀಡುತ್ತಿದ್ದ ಕಾರಣದಿಂದ ಇತ್ತೀಚೆಗೆ ಅವರನ್ನು ಅಮಾನತು ಮಾಡಲಾಗಿತ್ತು. ಇದೀಗ ಡ್ರಗ್ ಜಾಲಕ್ಕೆ ಸಹಕರಿಸುತ್ತಿದ್ದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ'' ಎಂದು ತಿಳಿಸಿದ್ದಾರೆ.
ರಾಜಕಾರಣಿ, ವೈದ್ಯ, ಉದ್ಯಮಿ ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳ ಮಕ್ಕಳು ಸೇರಿಕೊಂಡು ನಡೆಸುತ್ತಿದ್ದ ಡ್ರಗ್ ಜಾಲಕ್ಕೆ ಹೆಡ್ ಕಾನ್ಸ್ಟೆಬಲ್ ಪ್ರಭಾಕರ್ ಸಹಕಾರ ನೀಡುತ್ತಿದ್ದರು ಎಂದು ಹೇಳಲಾಗಿದೆ.